ಅಮರಗೋಳದ ಬನಶಂಕರಿ ದೇವಸ್ಥಾನವು ಬನಶಂಕರಿಗೆ ಅರ್ಪಿತವಾದ ಪುರಾತನ ದೇವಸ್ಥಾನವಾಗಿದೆ. == ಸ್ಥಳ == ಅಮರಗೋಳವು ಧಾರವಾಡ ಮತ್ತು ಹುಬ್ಬಳ್ಳಿಯ ನಡುವೆ ಇದೆ, ಹುಬ್ಬಳ್ಳಿ ನಗರ ಕೇಂದ್ರದಿಂದ ಸುಮಾರು ೯ ಕಿ.ಮೀ. ದೂರಕ್ಕೆ ಮತ್ತು ನವನಗರಕ್ಕೆ ಪಕ್ಕದಲ್ಲಿದೆ. ಅಮರಗೋಳ ನಲ್ಲಿರುವ ಬನಶಂಕರಿ ದೇವಸ್ಥಾನ ವು ಉಣಕಲ್ ಕೆರೆ ಮತ್ತು ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನಗಳಿಂದ ೪ ಕಿ.ಮೀ ದೂರದಲ್ಲಿದೆ. == ಅಮರಗೋಳದ ಬನಶಂಕರಿ ದೇವಸ್ಥಾನ == ಅಮರಗೋಳದಲ್ಲಿರುವ ಬನಶಂಕರಿ ದೇವಸ್ಥಾನದ ಹತ್ತಿರ ಜಕ್ಕಣಾಚಾರ್ಯರು ನಿರ್ಮಿಸಿದ ಶಂಕರಲಿಂಗನ ದೇವಸ್ಥಾನವಿದೆ. 13 ನೇ ಶತಮಾನದ ಆರಂಭದಲ್ಲಿ, ಈ ಕಾಲದ ದೇವಾಲಯಗಳು ಮೆಟ್ಟಿಲು-ವಜ್ರ ಮತ್ತು ಚಚ್ಚೌಕ ಯೋಜನೆ ಇರುವ ನಾಗರ ಶೈಲಿಯನ್ನು ಹೊಂದಿವೆ, ಮೆಟ್ಟಿಲು-ವಜ್ರ ಯೋಜನೆ ಹೊಂದಿರುವ ದೇವಾಲಯಗಳಲ್ಲಿ ಹಾನಗಲ್‌ನಲ್ಲಿರುವ ಗಣೇಶ ದೇವಸ್ಥಾನ, ಅಮರಗೋಳದ ಬನಶಂಕರಿ ದೇವಸ್ಥಾನ (ಇದು ಒಂದು ದ್ರಾವಿಡ ದೇಗುಲ ಮತ್ತು ಒಂದು ನಾಗರ ದೇಗುಲವನ್ನು ಹೊಂದಿದೆ), ಮತ್ತು ಮಹಾದೇವ ದೇವಸ್ಥಾನ (ಇಟಗಿ) ಯ ಸಮೂಹದ ಭಾಗವಾಗಿರುವ ಒಂದು ಸಣ್ಣ ದೇಗುಲ ಇವುಗಳು ಪ್ರಮುಖವಾಗಿವೆ ) ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ, ಇದು ಭಾರತೀಯ ಪುರಾತತ್ವ ಇಲಾಖೆಗೆ ಸೇರಿದೆ. == ಸಹ ನೋಡಿ == ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪ ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನ ಕುಂದಗೋಳ ಅಣ್ಣಿಗೇರಿ ಗದಗ ಲಕ್ಕುಂಡಿ ಉತ್ತರ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ == ಉಲ್ಲೇಖಗಳು ==